Home

  ಶ್ರೀರಂಗಪಟ್ಟಣ ಪುರಸಭೆಯ ಧ್ಯೇಯೋದ್ಧೇಶಗಳು

ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ಉತ್ತಮ ರಸ್ತೆ/ಚರಂಡಿ,ಕುಡಿಯುವ ನೀರು, ಬೀದಿ ದೀಪ ತ್ಯಾಜ್ಯ ಮುಕ್ತ ವಾತಾವರಣ ಕಲ್ಪಿಸುವುದು ಪುರಸಭೆಯ ಧ್ಯೇಯೋದ್ಧೇಶವಾಗಿರುತ್ತದೆ.

 


  ದಿನಾಂಕ:09-03-2012 ರಂದು 2012-13ನೇ ಸಾಲಿನ ಆಯ-ವ್ಯಯ ಸಭೆಯನ್ನು ಮಾನ್ಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು


 

ದಿನಾಂಕ:30-01-2012ರಂದು ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ಸ್ವಾಮಿಯ  ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

 

 


 

ಶ್ರೀರಂಗಪಟ್ಟಣ ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಭಾನುವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಜನಮನ ಸೂರೆಗೊಂಡಿತ್ತು.

 



 

 

 Municipal Reforms Cell, Directorate of Municipal Administration has been won the Bronze Award for the Project Asthi(GIS based property tax system) in National Award for e-Governance 2011

 


  Srirangapatna Water Supply Nodal Officer


 

 

 

   Town Municipal Council: Srirangapatna was Established in the year 1918 Population of town is 25080(as per 2011 census) Area of town is 8.6 Sq.Kms.It has 23 wards and equal number of Councilors

  

 


 

ಮಂಡ್ಯ ಜಿಲ್ಲೆ ,ಶ್ರೀರಂಗಪಟ್ಟಣವು ಒಂದು ಪೌರಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳು ಪ್ರಸಿದ್ದ ಯಾತ್ರ ಸ್ದಳ ಹಾಗೂ ಪ್ರವಾಸಿಧಾಮ.ಹಿಂದೆ ಗಂಗರ ,ಹೋಯ್ಸಳರ  ಹಾಗು ವಿಜಯನಗರ  ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದೆ. ಶ್ರೀರಂಗಪಟ್ಟಣವು ಮೈಸೂರು ಅರಸರ  ಹಾಗು ಹೈದರಾಲಿ  ಮತ್ತು ಟಿಪ್ಪೂ ಸುಲ್ತಾನರ ಕಾಲದಲ್ಲಿ  ರಾಜಧಾನಿಯಾಗಿ ಐತಿಹ್ಯ ನಿರ್ಮಿಸಿದೆ.

  ಶ್ರೀರಂಗಪಟ್ಟಣವು ಒಂದು ಮುಖ್ಯವಾದ ಪ್ರವಾಸಿಧಾಮವಾಗಿದ್ದು ಇಲ್ಲಿ ಪುರಾಣ ಪ್ರಸಿದ್ದ ಶ್ರೀರಂಗನಾಥ ಸ್ವಾಮಿಯವರ ದೇವಾಲಯವಲ್ಲದೇ ಅನೇಕ ವಿಷ್ಣು ಹಾಗು ಈಶ್ವರ ದೇವಾಲಯಗಳನ್ನೋಳಗೋಂಡಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕೋಟೆ ಹಾಗು ಜನಾಬ್ ಹೈದರಾಲಿ ಹಾಗು ಟಿಪ್ಪು ಸುಲ್ತಾನರು ಹಾಗು ಅವರ ವಂಶಸ್ಧರುಗಳ ಸಮಾಧಿಗಳಿರುವ ಆಕರ್ಷಕ ಗುಂಬಜ್, ಹಾಗೂ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ  (ದರಿಯಾ ದೌಲತ್ ಬಾಗ್ ) ಟಿಪ್ಪು ಸುಲ್ತಾನರ ಕಾಲದಲ್ಲಿ ಯುದ್ದ ಖೈದಿಗಳನ್ನು  ಬಂದಿಸಿ ಇಡಲಾಗುತ್ತಿದ್ದ ಅನೇಕ ಡಂಜನ್ ಗಳು ಬ್ರಿಟಿಷರೋಂದಿಗೆ ಯುದ್ದ ಮಾಡುವಾಗ ಟಿಪ್ಪು ಸುಲ್ತಾನರು ಮಡಿದ ಸ್ದಳ. ಅತಿ ಎತ್ತರವಾದ ಗೋಪ್ಪುರಗಳುಳ್ಳ ಮಸೀದಿ ಇವೇ ಮೊದಲಾದ ಐತಿಹಾಸಿಕ ಸ್ಮಾರಕಗಳುಳ್ಳ ಶ್ರೀರಂಗಪಟ್ಟಣವು ಪ್ರತಿ ನಿತ್ಯ ರಾಜ್ಯ ನೆರೆರಾಜ್ಯಗಳು ಹಾಗೂ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಅಲ್ಲದೆ ಪ್ರಸಿದ್ದ ಗಂಜಾಂ ಶ್ರೀ ನಿಮಿಷಾಂಬ ದೇವಾಲಯವು ಸಹ ಅತಿ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.  

          ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಗೆ ಸೇರಿದ ಒಂದು ತಾಲ್ಲೂಕು ಕೇಂದ್ರವಾಗಿದ್ದು , ಜಿಲ್ಲಾ ಕೇಂದ್ರ ಮಂಡ್ಯ ನಗರದಿಂದ 28 ಕಿ.ಮಿ. ದೂರದಲ್ಲಿ ಮೈಸೂರಿಗೆ ಹೋಗುವ ರಸ್ತೆಯಲ್ಲಿದೆ. ಪ್ರಸಿದ್ದ ಮೈಸೂರು ನಗರದಿಂದ ಶ್ರೀರಂಗಪಟ್ಟಣಕ್ಕೆ ಕೇವಲ 16 ಕಿ.ಮಿ ದೂರ ಮಾತ್ರ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ 125 ಕಿ.ಮೀ ದೂರದಲ್ಲಿದೆ ಶ್ರೀರಂಗಪಟ್ಟಣಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗಾಗಿರು ಬರುತ್ತಿದ್ದು ಈ ಉದ್ದೇಶಕ್ಕಾಗಿ ಬೆಂಗಳೂರು ಹಾಗೂ  ಮೈಸೂರು ಕೇಂದ್ರಗಳಿಂದ ಪ್ರವಾಸೋದ್ಯಮ ಇಲಾಖೆ ಪ್ರತಿನಿತ್ಯ ಅತಿಹೆಚ್ಚಿನ ಸೌಕರ್ಯವಿರುವ ಅತ್ಯಾಕರ್ಷಕ ಬಸ್ಗುಗಳನ್ನು ಪ್ರವಾಸಿಗರಿಗಾಗಿಯೆ ಮೀಸಲಿರಿಸಿದೆ. ಅಲ್ಲದೆ ಬೆಂಗಳೂರು ಮೈಸೂರು  ನಗರಗಳಿಂದ ಅತ್ಯಂತ ಸುಲಲಿತವಾಗಿ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯವಿರುತ್ತದೆ. ಅಲ್ಲದೆ ಉತ್ತಮ ರೈಲ್ವೆ ಸಂಪರ್ಕವೂ ಸಹ ಇರುತ್ತದೆ.

ಶ್ರೀರಂಗಪಟ್ಟಣದ ಅತ್ಯಂತ ಆಕರ್ಷಕ ಪ್ರವಾಸಿ  ಸ್ಥಳ ಹಾಗೂ ಪೌರಣಿಕ ಕೇಂದ್ರವೆಂದರೆ ಸುಪ್ರಸಿದ್ದ ಶ್ರೀರಂಗನಾಥ ಸ್ವಾಮಿಯವರ ದೇವಾಲಯ ಶ್ರೀರಂಗನಾಥ ಸ್ವಾಮಿಯವರ ದೇವಾಲಯವೂ ವಿಶಾಲವಾದ ಪ್ರದೇಶದಲ್ಲಿ ಬಹಳ ವಿಸ್ತಾರವಾಗಿ ಮೂರು ಹಂತಗಳಲ್ಲಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿರುತ್ತದೆ. ಶ್ರೀರಂಗನಾಥ ಸ್ವಾಮಿಯವರ ದೇವಾಲಯ ಗರ್ಭಗುಡಿಯು ಕ್ರಿ.ಶ 894ರಲ್ಲಿ ಗಂಗರು ಮುಖ್ಯಸ್ಥ ಶ್ರೀ ತಿರುಮಲಯ್ಯ ಎಂಬುವವರಿಂದ ನಿರ್ಮಿಸಲ್ಪಟ್ಟಿತ್ತೆಂದು ತಿಳಿಸುತ್ತದೆ. ಇತಿಹಾಸ ಆನಂತರ ವಿಜಯನಗರದ ಅರಸರ ಕಾಲದಲ್ಲಿ ನವರಂಗ ಮುಖಮಂಟಪ, ದೇವಾಲಯದ ರಾಜಗೋಪುರವು ನಿರ್ಮಾಣವಾಗಿರುವುದಾಗಿ ತಿಳಿದು ಬಂದಿದೆ ಮೂರನೆ ಹಂತ ಪಾತಾಳಂಕಣದ ಮುಂದಿನ ಭಾಗ ಜನಾಬಗ ಹೈದರಾಲಿಯವರ ಕಾಲದಲ್ಲಿ ಗರ್ಭಗುಡಿಗೆ ಸೇರಿದಂತೆ ಸುತ್ತು ಶ್ರೀ ವಿಷ್ಣುವಿನ ವಿವಿಧ ಅವತಾರದ ಸುಂದರ ವಿಗ್ರಹಗಳ ಗುಡಿಗಳಿವೆ. ಅಲ್ಲದೆ ರಾಮಾನುಜಾಚಾರ್ಯರು, ಶ್ರೀ   ವೇದಂತ ದೇಶಿಕರು ಹಾಗೂ ಶ್ರೀ  ಜೀಯರ್ ರವರ ಗುಡಿಗಳಿಲ್ಲದೆ ವಿವಿಧ ಆಳ್ವಾರರ ಗುಡಿಗಳೂ ಸಹ  ಇವೆ. ಶ್ರೀರಂಗನಾಥ ಸ್ವಾಮಿಯವರ ಗರ್ಭಗುಡಿಯ ಪಕ್ಕದಲ್ಲಿ ಶ್ರೀ  ಮಹಾಲಕ್ಷೀ ಅಮ್ಮನವರು     ಶ್ರೀರಂಗನಾಯಕಿ     ನಾಮಕಿಂತ ಪ್ರತ್ಯೇಕ ಗರ್ಭಗುಡಿಯಲ್ಲಿ ನೆಲೆಸಿರುತ್ತಾರೆ .

ಶ್ರೀರಂಗನಾಥ ಸ್ವಾಮಿಯವರ ದೇವಾಲಯವನ್ನು ಪೌರಣಿಕ  ಹಿನ್ನೆಲೆಯಿಂದ ಗಮನಿಸಿದಾಗ  ಶ್ರೀರಂಗ  ಕ್ಷೇತ್ರ  ಸುತ್ತಲೂ ಹರಿಯುವ ಕಾವೇರಿ ಮಾತೆಯ ಪ್ರಾರ್ಥನೆಯ ಮೇರೆಗೆ ಹಾಗು ಶ್ರೀ ಗೌತಮ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ  ಶ್ರೀಮಹಾ ವಿಷ್ಣುವು    ಶ್ರೀರಂಗನಾಥ    ನಾಮಂಕಿರಾಗಿ ಈ ಕ್ಷೇತ್ರದಲ್ಲಿ  ನೆಲೆಸಿರುವುದಾಗಿ ಶ್ರೀ ವ್ಯಾಸ ಮಹರ್ಷಿ ಪ್ರಣೀತ  ಶ್ರೀ  ಬ್ರಹ್ಮಾಂಡ  ಪುರಣಾದಲ್ಲಿ ಉಕ್ತವಾಗಿದೆ . ಕಾವೇರಿ ನದಿಯಿಂದ  ಸುತ್ತುವರಿಯಲ್ಪಟ್ಟ ಮೂರು  ರಂಗ  ಕ್ಷೇತ್ರಗಳಲ್ಲಿ    ಆದಿರಂಗ   ನಾಗಿಯೂ , ಶ್ರೀಮತ್ ಪಶ್ಚಿಮ ರಂಗನಾಥನಾಗಿಯೂ . ಗೌತಮ ಕ್ಷೇತ್ರವೆಂದೂ  ಸಹ ಕ್ಷೇತ್ರವನ್ನು  ಕರೆಯುತ್ತಾರೆ.

 

 


ಗಣಕೀಕರಣ:ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಶ್ರೀಘ್ರದಲ್ಲೆ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.

Computerisation:Properties within Srirangapatna TMC limits have been identified & details have been collected & Computerisation of records is under progress.Citizens can avail this facility to pay Property Tax shortly

 


 

ಇದರ ಜೊತೆಗೆ 1982 ನೇ ಸಾಲಿನಿಂದ ಈವರೆಗೆ ಜನನ ಮತ್ತು 1982ನೇ ಸಾಲಿನಿಂದ ಈವರೆಗೆ ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.

Birth 1982 to Till date & Death 1982 to Till Date Records are available in online. Citizens are make use of this facility to register & obtain Birth & Death Certificates.

 


 

 ಸಾರ್ವಜನಿಕರು ತಮ್ಮ ದೂರುಗಳನ್ನು ಸಾರ್ವಜನಿಕ ಕುಂದು ಕೊರತೆ ವಿಭಾಗದಲ್ಲಿ ಅಂತರ್ಜಾಲ, ದೂರವಾಣಿ ಮತ್ತು  ಪತ್ರದ ಮುಖಾಂತರ ನೋಂದಾಯಿಸ ಬಹುದು.

 

ದೂರವಾಣಿ ಸಂಖ್ಯೆ- 08236- 253030

ಅಂತರ್ಜಾಲ : www.srirangapatnatown.gov.in/pgr/grievance-redressal-jsp

 


 

 

 

 

 "This Page is Maintained by M.Rajanna Chief Officer" 9480362679

Last Edited Date:27-04-2012

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 "This Page is Maintained by M.Rajanna Chief Officer" 9480362679

Last Edited Date:29-02-2012

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

No. Of Visitors :
Last Updated   : 19/05/2012  Release History
Release 2.0.0, Powered By Karnataka Municipal Data Society & maintained by Srirangapatna TMC
This website can best viewed with the resolution 1024 * 768 using Internet Explorer 7.0 or above.
Valid CSS!